RSS Feed

Mar 26, 2016

My dad's retirement address

This epilogue was written by my dad, he shared this with his colleagues the day he retired. Every time I read this, I question myself, is it really possible to ever have such devotion and loyalty towards one's employer in these days. He's long gone now, guess finding out an answer is not always an easy task.

ನನ್ನ ೬೦ ವರ್ಶಗಳ ಇತಿಹಾಸದ ನಿರೂಪಣೆ ಹೀಗಿದೆ.

೧೯೫೦ರ ಜೂನ್ ೩೦ ರಂದು, ಬೆಂಗಳೂರಿನ ಶ್ರೀವೈಷ್ನವ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ಬೆಂಗಳೂರಿನಲ್ಲೇ ವ್ಯಾಸಂಗ ಮಾಡಿ, ಬೆರಳಚ್ಚಿನಲ್ಲಿ ಪರಣಿತನಾಗಿ, ವಿಜಯಾ ಕಾಲೇಜಿನಲ್ಲಿ ಭೌತ ಹಾಗೂ ರಸಾಯನ ಶಾಸ್ತ್ರ ವ್ಯಾಸ್ಂಗ ಮಾಡಿ, ೧೯೬೯ರಲ್ಲಿ ಪದವೀದರನಾದ ಕೂಡಲೇ, ಮದ್ರಾಸ್ ಆಟೋ ಸರ್ವೀಸ್ ಎಂಬ ಸಂಸ್ಥೆಯಲ್ಲಿ ಆರು ತಿಂಗಳ ಕಾಲ ಸೇವೆ ಮಾಡಿ, ಆನಂತರ ಉದ್ಯೋಗ ವಿನಿಮಯ ಕಛೇರಿಯ ಸೌಜನ್ಯತೆಯಿಂದ ೧೯೭೦ರ ಆಪ್ರಿಲ್ ತಿಂಗಳ ಒಂದು ಸಂಜೆ ಬೆರಳಚ್ಚು ಗುಮಾಸ್ತೆ’ ಹುದ್ದೆಯ ಸಂದರ್ಶನಕ್ಕಾಗಿ ಮೈಸೂರ್ ಬ್ಯಾಂಕ್ನ ಸುಂದರ ಕಲ್ಕಟ್ಟಡೊಳಗೆ ನಾ ಮೊದಲ ಸಲ ಪಾದವಿರಿಸಿದೆ.

ಗುಂಜಾನರಸಿಂಹಸ್ವಾಮಿಯ ಕೃಪಾಕಟಾಕ್ಷದಿಂದ ಹಾಗೂ ಗುರುಹಿರಿಯರ ಆಶೀರ್ವಾದದಿಂದ, ತಿರುಮಕೂಡಲು ನರಸೀಪುರದ ಮೈಸೂರ್ ಬ್ಯಾಂಕ್ ಶಾಖೆಯಲ್ಲಿ ೧೫.೦೬.೧೯೭೦ ರಿಂದ ನನ್ನ ವೃತ್ತಿ ಜೀವನವನ್ನು ಮುಂದುವರಿಸಿದೆ. ತದನಂತರ, ಮುಖ್ಯಕಛೇರಿಯಲ್ಲಿ ಉದರೀ ವಿಭಾಗ, ಶಂಕರಪುರ, ಚಿಕ್ಕಪೇಟೆ ಮತ್ತು ಅರಳೇಪೇಟೆ ಶಾಖೆಗಳಲ್ಲಿ ಬ್ಯಾಂಕಿನ ವಿವಿಧ ಕಾಯಕಗಳನ್ನು ಕಲಿತು, ಅರಿತು, ನುರಿತು, ಲೆಖ್ಖತನಿಖಾದಿಕಾರಿ ಸಹಾಯಕನಾಗಿ ಕಾರ್ಯ ನಿರ್ವಹಿಸಿದೆ.

ವಿ ವಿ ಮಾರ್ಕೆಟ್ ಶಾಖೆಯಲ್ಲಿ ಲೆಖ್ಖ ತನಿಕೆ ಮಾಡಿ, ನಾ ನಿವೇದಿಸಿದ ತಪ್ಪುಗಳನ್ನು ನಾನೇ ಸರಿಪಡಿಸಬೇಕು ಅನ್ನುವಂತೆ, ೦೧.೦೧.೮೦ರಿಂದ ಅದೇ ಶಾಖೆಯಲ್ಲಿ ಸಹಾಯಕ ವ್ಯವಸ್ತ್ಪಕನಾಗಿ ಪದೋನ್ನತಿಗೊಂಡು, ಅಧಿಕಾರಿವರ್ಗಕ್ಕೆ ಪಾದವಿರಿಸಿದೆ. ವಿ ವಿ ಮಾರ್ಕೇಟ್, ದಾವಣಗೆರೆ ಮುಖ್ಯ ಹಾಗೂ ಪಿ ಜೆ ಬಡಾವಣೆ, ಹುಬ್ಬಳಿ ವಲಯದ ಮೊದಲ ಡಿಸಿಪ್ಲಿನಿಯರಿ ಆಕ್ಶನ್ ಸೆಲ್ ಅಧಿಕಾರಿಯಾಗಿ ನಿಶ್ಟೆಯಿಂದ ನಿಶ್ಪಕ್ಷಪಾತ ಸೇವೆ ಸಲ್ಲಿಸಿದ ಬಳಿಕ, ಕೆ ಆರ್ ಪೇಟೆ ಯಲ್ಲಿ ಶಾಖಾಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದೆ. ಆನಂತರ ಬೆಂಗಳೂರಿನ ಎಫ಼್ ಬಿ ಯಲ್ಲಿ ಸಾಫ಼್ಟ್ ವೇರ್ ಸಪೋರ್ಟ್, ವಿದೇಶಿ ವಿನಿಮಯ ಆಮುದು, ಹಾಗೂ ಉದರಿ ವಿಭಾಗಗಳಲ್ಲಿ, ಸಮರ್ಥತೆಯಿಂದ ಕಾರ್ಯನಿರ್ವಹಿಸಿ, ೧೯೯೪ ಡಿಸೆಂಬರ್ ಮಾಹೆಯಲ್ಲಿ ಸ್ಕೇಲ್ ಮೂರಕ್ಕೆ ಪದೊನ್ನತಿ ಪಡೆದೆ.

೧೯೯೬ ರಿಂದ ೧೯೯೯ ವರೆಗೆ ದಾಂಡೇಲಿ ಶಾಖಾ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸಿದಮೇಲೆ, ಮೂರು ವರ್ಶಗಳ ಕಾಲ ಲೆಖ್ಖತನಿಕಾಧಿಕಾರಿಯಾಗಿ ಹಗೂ ತನಿಖಾಧಿಕಾರಿಯಾಗಿ, ಹಲವಾರು ತನಿಖೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಯಶಸ್ವಿಯಿಂದ ಜರುಗಿಸಿ, ಮತ್ತೊಂದು ಸಲ ಎಫ಼್ ಬಿ ಯಲ್ಲಿ ಲೆಖ್ಖಪತ್ರ ವ್ಯವಸ್ಥಾಪಕನಾಗಿ,ಲೇಖನ ಸಾಮಗ್ರಿ ವಿಭಾಗದ ವ್ಯವಸ್ಥಾಪಕನಾಗಿ ಕೆಲಸ ನಿರ್ವಹಿಸಿದೆ. ಆನಂತರ ಬೆಂಗಳೂರಿನ ಖಜಾನೆ ಶಾಖೆಯ ಲೆಖ್ಖ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸಿತ್ತುರುವಾಗ ನನ್ನ ಶ್ರೀಮತಿಯವರಿಗೆ ಮೊಳಕಾಲು ಕೇಲು ಬದಲಾವಣೆ ಶಸ್ಥ್ರಚಿಕಿತ್ಸೆ ಮಾಡಿಸಿದ ಸಮಯದಲ್ಲಿ, ಆತಂಕಗೊಂಡು, ಸ್ವಯಮ್ ನಿವ್ರುತ್ತಿಗರ್ಜಿ ಕೊಟ್ಟಿದ್ದೆ.

ದೈವಾನುಗ್ರಹದಿಂದ ನನ್ನ ಶ್ರೀಮತಿಯವರ ಆರೋಗ್ಯ ಸುಧಾರಿಸಿದಮೇಲೆ ಸ್ವಯಂ ನಿವ್ರುತ್ತಿಯರ್ಜಿ ವಾಪ್ಸು ಪಡೆದು, ಬ್ಯಾಂಕ್ ಸೇವಾವಧಿಯ ಎರಕಮಾಡಿದ ಮೇಲೆ, ಕಾವೇರಿಕಲ್ಪತರು ಗ್ತಾಮೀಣ ಬ್ಯಾಂಕ್ ಮುಖ್ಯ ನಿರೀಕ್ಶಕನಾಗಿ ಕಾರ್ಯನಿರ್ವಹಿಸಿದೆ.

ಎಂಟೊರ್ಷಕ್ ನನ್ಮಗ ದಂಟೆಂಬಂತೆ, ಮೂರರಿಂದ ನಾಲ್ಕರ ಪದೋನ್ನತಿಯನ್ನು ಒಂಬತ್ತನೇಯ ದಂಡೆಯಾತ್ರೆಯಲ್ಲಿ, ೨೦೦೭ ಡಿಸೆಂಬರ್ ರಿಂದ ಪಡೆದ ನಾಲ್ಕರ ಪದೋನ್ನತಿಯನ್ನು, ಆದರದಿಂದ ಸ್ವೀಕರಿಸಿ, ಮುಖ್ಯಕಛೇರಿಯ ಅಂತರರಾಶ್ಟ್ತ್ರೀಯ ವಿಭಾಗದಲ್ಲಿ, ಅತ್ಯಂತ ಸಂಕಷ್ಟ ಪರಿಸ್ಥಿತಿಗಳ ನಡುವೆ, ಮನೋಸ್ಥೈರ್ಯದಿಂದ ಹಾಗೂ ಮೇಲಧಿಕಾರಿಗಳ ಅಮೂಲ್ಯ ಮಾರ್ಗ ದರ್ಶನದಿಂದ, ಆತ್ಮ ಸಾಕ್ಶಿಯಿಂದ ಕಾರ್ಯ ನಿರ್ವಹಿಸಿ ಸಂತ್ರುಪ್ತಿಯಿಂದ ಇಂದು ನಾನು ನನ್ನ ವ್ರುತ್ತಿಜೀವನದಿಂದ ನಿವ್ರುತ್ತನಾಗುತ್ತಿದ್ದೇನೆ.

ಹೇ ನನ್ನ ಸ್ನೇಹಮಯಿ, ನಾನಿನ್ನ ಗ್ರಾಹಕ ಸೇವೆಯನ್ನು ಹಲವಾರು ರೂಪಗಳಲ್ಲಿ ಮಾಡಲು, ನೀನೆನ್ನ ಚೈತನ್ಯಮಯಿ
ನನಗರಿಯದೇ ನನ್ನಿಂದಾಗಿರಬಹುದಾದ ತಪ್ಪುನೆಪ್ಪುಗಳನ್ನು ಮರೆತು ನೀನೆನ್ನ ಪೋಶಿಸಿದೆ, ನೀ ದಯಾಮಯಿ.
ನಿನ್ನ ಔದಾರ್ಯತೆಯಿಂದ ಸಂಸಾರ, ಮಕ್ಕಳ ವ್ಯಾಸಂಗ, ಹಾಗೂ ಚಾವಣಿ
ನೆಮ್ಮದಿ ಜೀವನದಾಯಕ ಮೈಸೂರ್ ಬ್ಯಾಂಕ್ ಗೆ, ಶ್ರೀವತ್ಸ ಅವನ ಜೀವನಪರ್ಯಂತ, ಚಿರಋಣಿ.
  
ನಮ್ಮೆಲ್ಲರ ನಾಟಕದ ಜಿ ಎಮ್ ಅಂದರೆ ಗುರುಮೂರ್ತಿ’ ಕೂಡ ನಮ್ಮೊಡನೆ ನಿವ್ರುತ್ತಿಯ ಸಹಪಾಠಿ ಆಗಿರುವುದರಿಂದ ಸಭಾಂಗಣ ತುಂಬಿ ತುಳುಕುತ್ತಿದೆ ಅಂದರೆ ಅದು ಅತಿಶಯೋಕ್ತಿಯಾಗಲಾರದು. ಹೂವಿಂದ ನಾರೂ ಸ್ವರ್ಗಕ್ಕೆ ಅನ್ನುವಂತೆಇದು ನನ್ನ ಸುದೈವ, ಅವರಿಗೂ ಹಾಗೂ ನನ್ನ ಇಂದು ನಿವ್ರುತ್ತಲಾಗಿರುವ ನನ್ನ ಇತರೇ ಸಹಪಾಟಿ ಮಿತ್ರರೆಲ್ಲರಿಗೂ ದೇವರು ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಕೂಡಿದ ವಿರಾಮದಿಕೂಡಿದ ನಿವ್ರುತ್ತಿ ಜೀವನ ಕೊಡಲೆಂದು ಭಗವ್ಂತನನ್ನು ಪ್ರಾರ್ಥಿಸಿ, ಮುಂದಿನ ಚುಟುಕು ಸಾಲುಗಳನ್ನೋದಿ, ನಿಮ್ಮೆಲ್ಲರಿಗೂ ನನ್ನ ಸವಿನಯಪೂರಕ ಬೀಳ್ಕೊಡುಗೆಗೆ ಪ್ರತಿಕೊಡುಗೆಯನ್ನು ಕೊಡುತ್ತಿದ್ಧೇನೆ, ಇದನ್ನು ದಯವಿಟ್ಟು ಸ್ವೀಕರಿಸಿ

ಪುಂಗನೂರ ಮದುವೆಯಲ್ಲಿ ಕರೆಸ್ಕೊಳ್ದೆ ಹೋದವರು, ಹಳೆ ಚಪ್ಲಿ ಕದ್ದವರು ನೀವಲ್ಲವೇ?
ಕದ್ದು ಸಿಕ್ಬಿದ್ದಾಗ ಮರೆತು ಕಾಲಿಟ್ನೆಂದು ಪೆಚ್ಚಾಗಿ ನಿಂತವರು ನೀವಲ್ಲವೆ?ನೀವಲ್ಲವೆ?

ಬಿಯೆ ಪಾಸಾಯ್ತ್ಂದು ಬುರುಡೇಯ ಕೊಚ್ದವರು ಶುದ್ಧ್ ಶುಂಠೀ ಕಾಯಿ ನೀವಲ್ಲವೇ?
ನಂತಮ್ಮ ನಿಮ್ಹತ್ರ ಡೂಯಿಂಗ್ ವೆಲ್ ಎಂದಾಗ ಟುಸ್ಸುಪುಸ್ಸು ಎಂದವರು ನೀವಲ್ಲವೆ?ನೀವಲ್ಲವೆ?

ಭಾರಿಮಳೆ ಬಿದ್ದಾಗ ಛತ್ರಿ ನೆನೆಯುತ್ತೆಂದು ಬರಿ ಕೈಲಿ ಹೋದವರು ನೀವಲ್ಲವೆ?
ಮಳೆ ಸ್ಟಾಪಾದಾಗ ಅರ್ಧ ರಾತ್ರಿಯಹೊತ್ತು ಛತ್ರಿ ಬಿಚ್ ಹೊರಟವರು ನೀವಲ್ಲವೆ? ನೀವಲ್ಲವೆ?

ಅಮಾವಾಸ್ಯೆ ರಾತ್ರಿಯಲ್ಲಿ ಕಳ್ಳರು ನುಗ್ದಾಗ ಮುಸುಕನ್ನು ಬೀರ್ದವರು ನೀವಲ್ಲವೆ?
ಮನೆ ಲೂಟಿ ಆದ್ಮೇಲೆ ಮಡಿಕೋಲ ಬೀಸುತ್ತ ಮೀಸೆಯ ತಿರ್ದವರು ನೀವಲ್ಲವೆ? ನೀವಲ್ಲವೆ?

ಎಲೆ ಮುಂದೆ ಕೂತಾಗ ಚಿರೋಟಿ ಬಡಿಸ್ದಾಗ ಇಪ್ಪತ್ತೂ ನುಂಗ್ದವ್ರು ನೀವಲ್ಲವೆ?
ಇಪ್ಪತ್ತೂ ನುಂಗ್ಬಿಟ್ಟು ಹೊಟ್ಟೆಯುಬ್ಬರಿಸಿಕೊಂಡು ಬಕ್ಕೀಟ ಹಿಡ್ದವ್ರು ನೀವಲ್ಲವೆ? ನೀವಲ್ಲವೆ?

ಸಿಟಿ ಸೈಡು ಹೋಗ್ಬಿಟ್ಟು ಸ್ವೀಟ್ಸ್ ತನ್ನಿ ಯೆಂದಾಗ ಬ್ರೂಕ್ ಲ್ಯಾಕ್ಸ್ ತಂದವ್ರು ನೀವಲ್ಲವೆ?
ಯಾಕೆಂದು ರೇಗ್ದಾಗ ಬರೀ ಬ್ರೂಕ್ ಲ್ಯಾಕ್ಸ್ ತಿಂದು ಸುಸ್ತಾಗಿ ಮಲಗ್ದವ್ರು ನೀವಲ್ಲವೆ? ನೀವಲ್ಲವೆ?

ಕರಿಸೀರೆಯುಟ್ಟವಳ ಬಳೇಪೇಟೇಲ್ ಕಂಡಾಗ ಲೇ ಲೇ ಲೇ ಎಂದವ್ರು ನೀವಲ್ಲವೆ?
ಕೆನ್ಗೆರ್ಡು ಬಿದ್ದಾಗ ಅಯ್ಯೋ ಅವಳಲ್ವೆಂದು ಗೋಳಾಡ್ತ ಹೋದವ್ರುನೀವಲ್ಲವೆ? ನೀವಲ್ಲವೆ?

ಏಲ್ಲರಿಗೂ ಮತ್ತೊಮ್ಮೆ ನನ್ನ ವಿನಯಪೂರ್ವಕ ನಮಸ್ಕಾರಗಳು,
ಇತಿ ನಿಮ್ಮ 
ಕೆ ಅರ ಶ್ರೀವತ್ಸನ್